Ajja v
Indian folkLyrics
ಹೂವಿನ ಬಳ್ಳಿ ಹುಬ್ಬಳ್ಳಿ
ಸಿದ್ಧಾರೂಢರ ನೆಲೆ ಇಲ್ಲಿ
ಸಿದ್ಧನ ಕೀರುತಿ ಹೋದಲ್ಲಿ
ಶರಣು ಬಂದೆವು ನಿನ್ನಲ್ಲಿ
ಕಾಯೋ ದೈವವೇ ನಮಗಿಲ್ಲಿ
ಭಕ್ತರ ಭಕ್ತಿಗೆ ಕೊನೆಯೇಲ್ಲಿ?
ಹೂವಿನ ಬಳ್ಳಿ ಹುಬ್ಬಳ್ಳಿ
ಸಿದ್ಧಾರೂಢರ ನೆಲೆ ಇಲ್ಲಿ
ಸಿದ್ಧನ ಕೀರುತಿ ಹೋದಲ್ಲಿ
ಶರಣು ಬಂದೆವು ನಿನ್ನಲ್ಲಿ
ಶರಣು ಬಂದೆವು ನಿನ್ನಲ್ಲಿ
ಆರೂಡ ಜ್ಯೋತಿ ಬೆಳಗುತಿದೆ
ಬಾಳಿಗೆ ಬೆಳಕು ನೀಡುತ್ತಿದೆ
ನಿತ್ಯವು ವೀಣೆ ಮಿಡಿಯುತಿದೆ
ಸತ್ಯದ ನಾದವು ಹೊರಡುತಿದೆ
ಜ್ಞಾನದ ಸುಧೆ ಹರಿಯುತಿದೆ
ಅಂಧಕಾರ ಸರಿಯುತಿದೆ
ನಾನು ನನ್ನದು ಕರಗುತಿದೆ
ಮುಕುತಿ ಭಾವ ದೊರೆಯುತಿದೆ
ಕರೆಯುತಿದೆ ಕರೆಯುತಿದೆ
ಅಜ್ಜನ ಬೀಡು ಕರೆಯುತಿದೆ
ಮೆರೆಯುತಿದೆ ಮೆರೆಯುತಿದೆ
ಸಿದ್ಧನ ಬೋಧನೆ ಮೆರೆಯುತಿದೆ
ಹೂವಿನ ಬಳ್ಳಿ ಹುಬ್ಬಳ್ಳಿ
ಸಿದ್ಧಾರೂಢರ ನೆಲೆ ಇಲ್ಲಿ
ಸಿದ್ಧನ ಕೀರುತಿ ಹೋದಲ್ಲಿ
ಶರಣು ಬಂದೆವು ನಿನ್ನಲ್ಲಿ
ಕ್ಷಣ ನೋಟಕೆ ಬಂದೆವು
ಕಷ್ಟ ಕಾರ್ಪಣ್ಯ ತಂದೆವು
ಓಂ ನಮಃ ಶಿವಾಯ ಎಂದೆವು
ಸ್ಮರಣೆಯಲ್ಲಿ ಮಿಂದೆವು
ಮಂಗಳಾರುತಿ ಪಡೆದೆವು
ನಾನಾ ರೂಪವು ಕಂಡೆವು
ಭಕ್ತಿ ರಸವು ಉಂಡೆವು
ನಾಮಬಲವು ಹೊಂದೆವು
ಸೆಳೆಯುತಿದೆ ಸೆಳೆಯಿತಿದೆ
ಧರ್ಮಕ್ಷೇತ್ರ ಸೆಳೆಯುತಿದೆ
ಕಳೆಯುತಿದೆ ಕಳೆಯುತಿದೆ
ಪಾಪತಾಪ ಕಳೆಯುತಿದೆ
ಹೂವಿನ ಬಳ್ಳಿ ಹುಬ್ಬಳ್ಳಿ
ಸಿದ್ಧಾರೂಢರ ನೆಲೆ ಇಲ್ಲಿ
ಸಿದ್ಧನ ಕೀರುತಿ ಹೋದಲ್ಲಿ
ಶರಣು ಬಂದೆವು ನಿನ್ನಲ್ಲಿ
ಕಾಯೋ ದೈವವೇ ನಮಗಿಲ್ಲಿ
ಭಕ್ತರ ಭಕ್ತಿಗೆ ಕೊನೆಯೇಲ್ಲಿ?